ಎಸ್. ಸುರೇಶ್ ಕುಮಾರ್ (ಜನನ ೧೧ ನವೆಂಬರ್ ೧೯೫೫) ಇವರು ಒಬ್ಬ ಭಾರತೀಯ ಜನತಾ ಪಕ್ಷದ ರಾಜಕಾರಣಿಯಾಗಿದ್ದು, ೨೦ ಆಗಸ್ಟ್ ೨೦೧೯ ರಿಂದ ೨೬ ಜುಲೈ ೨೦೨೧ ರವರೆಗೆ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಕಾನೂನು ಮತ್ತು ರಾಜ್ಯ ಸಚಿವರಾಗಿದ್ದರು ಹಾಗೂ ಇವರು ೭ ಜೂನ್ ೨೦೦೮ ರಿಂದ ೧೩ ಮೇ ೨೦೧೩ ರವರೆಗೆ ಕರ್ನಾಟಕದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು. ಬೆಂಗಳೂರಿನಲ್ಲಿ ಜನಿಸಿದ ಇವರು ಚಿಕ್ಕಂದಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಸಂಬಂಧ ಹೊಂದಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಭಾಗದಲ್ಲಿ ಪದವಿ ಮುಗಿಸಿದರು. ತುರ್ತು ಪರಿಸ್ಥಿತಿಯನ್ನು ಸಕ್ರಿಯವಾಗಿ ವಿರೋಧಿಸಿದ ಕಾರಣ, ಅವರನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬಂಧಿಸಲಾಯಿತು. ನಂತರ, ಅನೇಕ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕರನ್ನು ಬಂಧಿಸಲಾಯಿತು. ಜೈಲಿನಿಂದ ಬಿಡುಗಡೆಯಾದ ನಂತರ, ಅವರು ೧೯೭೭-೧೯೮೦ ರ ಅವಧಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಅವರು ೧೯೮೧ ರಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ತಮ್ಮನ್ನು ಬಾರ್ ಕೌನ್ಸಿಲ್‌ಗೆ ದಾಖಲಿಸಿಕೊಂಡರು ಮತ್ತು ಸಕ್ರಿಯ ರಾಜಕೀಯಕ್ಕೆ ಧುಮುಕುವ ಮೊದಲು ಸ್ವಲ್ಪ ಸಮಯದವರೆಗೆ ಕಾನೂನಿನ ಅಭ್ಯಾಸ ಮಾಡಿದರು. ಅವರು ೧೯೮೩ ರಲ್ಲಿ, ಬಿಜೆಪಿ ಪಕ್ಷದಿಂದ ಬೆಂಗಳೂರು ಮಹಾನಗರ ಪಾಲಿಕೆಗೆ ಮೊದಲ ಬಾರಿಗೆ ಆಯ್ಕೆಯಾದರು ಮತ್ತು ಸತತ ೨ ಅವಧಿಗೆ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದರು. ೧೯೯೪ ಮತ್ತು ೧೯೯೯ ರಲ್ಲಿ, ೨ ಅವಧಿಗೆ ರಾಜಾಜಿನಗರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿ ಮಾದರಿ ಶಾಸಕರಾಗಿ ಮುಂದುವರಿದರು. ಅವರು ೨೦೦೮ ಮತ್ತು ೨೦೧೩ ರ ಚುನಾವಣೆಗಳಲ್ಲಿ ಕರ್ನಾಟಕ ವಿಧಾನಸಭೆಗೆ ಮರು ಆಯ್ಕೆಯಾದರು. ಸುರೇಶ್ ಕುಮಾರ್‌ರವರು ೨೦೦೮ ರಲ್ಲಿ, ಮೂರನೇ ಅವಧಿಗೆ ಆಯ್ಕೆಯಾದರು ಮತ್ತು ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಕಾನೂನು, ನಗರಾಭಿವೃದ್ಧಿ, ಸಂಸದೀಯ ವ್ಯವಹಾರಗಳು ಮತ್ತು ಬಿಡ್ಬ್ಲ್ಯೂಎಸ್‌ಎಸ್‌ಬಿ ಸಚಿವರಾಗಿ ನೇಮಕಗೊಂಡರು. == ಪಡೆದ ಸ್ಥಾನಮಾನಗಳು == ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಎರಡು ಬಾರಿ ಕಾರ್ಪೊರೇಟರ್ ಆಗಿ ಸಲ್ಲಿಸಿದ ಸೇವೆ (೧೯೮೩ ಮತ್ತು ೧೯೯೦) ಪಾಲಿಕೆಯ ಬಿಜೆಪಿ ಗುಂಪಿನ ನಾಯಕ. ೧೯೮೮-೧೯೯೦ ರಲ್ಲಿ, ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಚುನಾಯಿತ ಶಾಸಕರು : ೧೯೯೪, ೧೯೯೯, ೨೦೦೮, ೨೦೧೩, ೨೦೧೮, ೨೦೨೩ ೧೯೯೭–೧೯೯೯ ರ, ಅವಧಿಯಲ್ಲಿ ಬಿಜೆಪಿ ಗುಂಪಿನ ಉಪನಾಯಕ. ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ- ೧೯೯೧. ೧೯೯೬ ಮತ್ತು ೨೦೦೪ ರ, ಅವಧಿಯಲ್ಲಿ ರಾಜ್ಯ ವಕ್ತಾರರು. ೨೦೦೫–೨೦೦೮ ರ, ಅವಧಿಯಲ್ಲಿ ಪ್ರಧಾನ ಕಾರ್ಯದರ್ಶಿ. ರಾಜಾಜಿನಗರ ಕ್ಷೇತ್ರದಿಂದ ೧೩ ನೇ ಕರ್ನಾಟಕ ವಿಧಾನಸಭೆಗೆ ಆಯ್ಕೆ. ೨೦೦೮ ರಲ್ಲಿ, ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಮಂತ್ರಿ. ೨೦೧೧ ರ, ವಿಧಾನ ಸಭೆಯ ಸಭಾನಾಯಕರು. ೨೦೧೮ ರ, ಚುನಾವಣೆಯಲ್ಲಿ ರಾಜಾಜಿನಗರ ಕ್ಷೇತ್ರದಿಂದ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾದರು. ಜುಲೈ ೨೦೧೯ ರಲ್ಲಿ, ನಾಲ್ಕನೇ ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಶಿಕ್ಷಣ ಸಚಿವರಾಗಿ ನೇಮಕಗೊಂಡರು. == ರಾಜಕೀಯ ಸಮಯ == ೨೦೧೯ - ೨೦೨೧: ಕರ್ನಾಟಕ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಪ್ರತಿನಿಧಿಸಿದ್ದಾರೆ. ೨೦೧೯ - ೨೦೨೦: ಕರ್ನಾಟಕ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ೨೦೦೮ - ೨೦೧೩: ಕರ್ನಾಟಕ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. ೨೦೦೮ - ಪದಾಧಿಕಾರಿ: ರಾಜಾಜಿ ನಗರ ಕ್ಷೇತ್ರದಿಂದ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು. ೨೦೨೩ ರ, ವಿಧಾನಸಭಾ ಚುನಾವಣೆಯಲ್ಲಿ ರಾಜಾಜಿನಗರ ಕ್ಷೇತ್ರದಿಂದ ಐಎನ್‌ಸಿ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಸೋಲಿಸಿ ಆಯ್ಕೆಯಾದರು. ೧೯೯೪–೨೦೦೪ ರಾಜಾಜಿ ನಗರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. == ಉಲ್ಲೇಖಗಳು ==